ಕೊಪ್ಪಳ 14: ಹಾಲುಮತ ಮಹಾಸಭಾದಿಂದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2024-25ನೇ ಸಾಲಿನ ಎಸ್‌ಎಸ್‌ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಾಲುಮತ ಮಹಾಸಭಾ ಜಿಲ್ಲಾಧ್ಯಕ್ಷ ಹನುಮಂತಪ್ಪ ಕೌದಿ ಹೇಳಿದರು.ಅವರು ಬುಧವಾರದಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದೇಶಿಸಿ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಕೊಪ್ಪಳ ತಾಲೂಕಿನ ಕುರುಬ ಸಮಾಜದ ಪ್ರತಿಭಾನ್ವಿತ 2024-25 ನೇ ಸಾಲಿನ ಎಸ್‌ಎಸ್‌ಎಲ್ ಸಿ ಪರೀಕ್ಷೆಯಲ್ಲಿ ಶೇಕಡಾ 90ಅ ಕ್ಕಿಂತ ಹೆಚ್ಚು ಅಂಕ ಪಡೆದ ಮತ್ತು ದ್ವಿತೀಯ ವರ್ಷದ ಪಿಯುಸಿ ಯ ಯಾವುದೇ ವಿಭಾಗದಲ್ಲಿ ಶೇಕಡಾ 85ಅಕ್ಕಿಂತ ಹೆಚ್ಚು ಅಂಕ ಪಡೆದ ಕೊಪ್ಪಳ ತಾಲೂಕಿನ ಕುರುಬ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅರ್ಜಿ ಆಹ್ವಾನಿಸಿದ್ದು,
ಆಸಕ್ತರು ಅರ್ಜಿ ಪ್ರತಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ ಅಥವಾ ವರ್ಗಾವಣೆ ಪ್ರಮಾಣ ಪತ್ರ, ಎರಡು ಪಾಸ್ ಪೋರ್ಟ್ ಫೋಟೋ ದೊಂದಿಗೆ ಅರ್ಜಿಯನ್ನು ಶ್ರೀಲಕ್ಷ್ಮೀನಾರಾಯಣ ಜೆರಾಕ್ಸ್ ಸೆಂಟರ್-9611981946, ತಿಕೋಟಿಕರ್ ಪೆಟ್ರೋಲ್ ಬಂಕ್ ಹಿಂದುಗಡೆ ಸಿಂಡಿಕೇಟ್ ಬ್ಯಾಂಕ್ - ಗಂಗಾ ಯಮುನಾ ಬ್ಯಾಂಕ್ ಹತ್ತಿರ ಕೊಪ್ಪಳ, ಶ್ರೀ ಬೀರಲಿಂಗೇಶ್ವರ ನೆಟ್ ಸೆಂಟರ್ 8431343458 ಗವಿಮಠ ಕಾಂಪ್ಲೆಕ್ಸ್ (ಗವಿಮಠ ಕೆರೆ) ಕೊಪ್ಪಳ ಇಲ್ಲಿಗೆ ಮೇ 26ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದರು.
ಹೆಚ್ಚಿನ ಮಾಹಿತಿಗಾಗಿ ಹಾಲುಮತ ಮಹಾಸಭಾದ ತಾಲೂಕ ಗೌರವಾಧ್ಯಕ್ಷ ದ್ಯಾಮನಗೌಡ ಭೀಮನೂರು 9901741295, ತಾಲೂಕು ಪ್ರಧಾನ ಕಾರ್ಯದರ್ಶಿ ಗವಿಸಿದ್ದಪ್ಪ ಗೊರವರ್ 9035512375, ಅನ್ನದಾನಿಸ್ವಾಮಿ ಚಿಕ್ಕಸಿಂದೊಗಿ 7022176178, ನಗರ ಘಟಕದ ಗೌರವಾಧ್ಯಕ್ಷರು ದ್ಯಾಮಣ್ಣ ಡೊಳ್ಳಿನ್ 8073711463, ಇವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.ಸುದ್ದಿಗೋಷ್ಠಿಯಲ್ಲಿ ಹಾಲುಮತ ಮಹಾಸಭಾದ ಕುಬೇರ್ ಮಜ್ಜಿಗಿ, ದ್ಯಾಮಣ್ಣ ಕರಿಗಾರ್, ಮುದ್ದಪ್ಪ ಗೊಂದಿ ಹೊಸಳ್ಳಿ, ಪರಶುರಾಮ್ ಅಣ್ಣಿಗೇರಿ, ಮಲ್ಲೇಶ್ ಹದ್ದೀನ್ ಉಪಸ್ಥಿತರಿದ್ದರು.